Monday 30 May 2011

ಏನೋ ಕನವರಿಕೆ ; ಅರ್ಧ ಸ್ವಪ್ನ ಅರ್ಧ ಎಚ್ಚರು; ಎಲ್ಲ ಅಸ್ಪಷ್ಟ. ಅಂದು ೧೯೩೮ರ ನುಗಿಲು ಹುಣ್ಣಿಮೆಯ ಸಂಜೆ; ನಾನು ಹುಟ್ಟಿದ ದಿನ .ಕೋಣೆಯಲ್ಲಿ ಮೂರೂ ಸಂಜೆಯ ತುಸು ಕತ್ತಲು..ನನ್ನ ಸುತ್ತಲು ನಾಲ್ಕೈದು ಹಿರಿಯ ಹೆಂಗಸರು.ಎಲ್ಲರೂ ಒಮ್ಮೆಲೇ ಬಗ್ಗಿ ನನ್ನನ್ನು ನೋಡಿ ತಮ್ಮಲ್ಲೇ ಏನೇನೋ ಪಿಸು ಮಾತನ್ನಾಡಿಕೋಳ್ಳುತ್ತಿದ್ದರು ."ಮಾಣಿ"ಎಂದಳು ಒಬ್ಬಳು ಹಿರಿಯ ಸ್ತೂಲ ಕಾಯದ ಅಜ್ಜಿ.ಮುಖ ಬಿಮ್ಮನಿದ್ದು ಕೆಂಪು ಸೀರೆ ಉಟ್ಟಿದ್ದಳು.ನಡು ವಯಸ್ಸಿನಹೆಂಗಸರಿಗೆ ಬಿಸಿನೀರು ಮತ್ತುಇನ್ನೂ ಏನೇನೂತರಲುಆದೇಶಿಸುತ್ತಿದ್ದಳು."ಜಾನ್ನಕಿ, ಗಂಡ ..ಹೆಣ್ಣೇ "ಹೊರಗಿನಿಂದ ಒಂದು ಗಂಡಸಿನ ಧ್ವನಿ. ಅವನನ್ನಅಜ್ಜ."ಗಂಡು ಅನಂತಣ್ಣ " ಮನೆಯಲ್ಲಿ ಒಮ್ಮೇಲೇ ಗಡಬಿಡಿ ಚಲೂಆಯಿತು.ಅಜ್ಜ ಬಗ್ಗೋಣಪಂಚಂಗ್ ತಂದು, ಶ್ರವಣ ನಕ್ಷತ್ರ ಮಕರ
ರಾಶಿ ಎಂದು ಖಾತ್ರಿ ಮಾಡಿಕೊಂಡ .   

No comments:

Post a Comment